Monday, October 29, 2018

DVG Nenpu-72 Book Release

"ಸಂಸ್ಕೃತಿ"ಯ ಇಂಗ್ಲಿಷ್ ಕೃತಿ ಬಿಡುಗಡೆ
--------------------------------------
"ಸಂಸ್ಕೃತಿ"- ಡಿವಿಜಿಯವರ ಶ್ರೇಷ್ಠ ಕೃತಿಗಳಲ್ಲೊಂದು. ಈ ಕೃತಿಯನ್ನು ನಾಡಿನ ಹಿರಿಯ ಸಾಹಿತಿ ಹಾಗೂ ವಿದ್ವಾಂಸರಾದ ಪ್ರೊ. ಎಲ್.ಎಸ್.ಶೇಷಗಿರಿರಾವ್ ಅವರು ಇಂಗ್ಲಿಷ್ ಗೆ ಭಾಷಾಂತರಿಸಿದ್ದಾರೆ. ಮಂಗಳೂರಿನ "ಡಿವಿಜಿ ಬಳಗ ಪ್ರತಿಷ್ಠಾನ''ವು ಈ ಕೃತಿಯನ್ನು ಪ್ರಕಾಶನಗೊಳಿಸಿದೆ. ಸಾಂಕೇತಿಕವಾಗಿ ಇದರ ಬಿಡುಗಡೆ ಕಾರ್ಯಕ್ರಮವನ್ನೂ ದಿನಾಂಕ 26-10-2018 ರಂದು ತುಮಕೂರಿನಲ್ಲಿ ಸರಸ್ ಫೌಂಡೇಷನ್ ಟ್ರಸ್ಟ್ ವತಿಯಿಂದ ನಡೆದ "ಡಿವಿಜಿ ನೆನಪು-72" ಕಾರ್ಯಕ್ರಮದಲ್ಲಿ ನಡೆಸಲಾಯಿತು. ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀಸ್ವಾಮಿ ಜಪಾನಂದಜಿ, ಖ್ಯಾತ ಕೈಗಾರಿಕೋದ್ಯಮಿ ಶ್ರೀ ಯಜ್ಞನಾರಾಯಣ ಕಮ್ಮಾಜೆ ಅವರ ಸಮ್ಮುಖದಲ್ಲಿ ಕೃತಿಯನ್ನು ತಿಪಟೂರು ಶಾಸಕರಾದ ಶ್ರೀ ಬಿ.ಸಿ.ನಾಗೇಶ್ ರವರು ಬಿಡುಗಡೆಗೊಳಿಸಿದರು. ಚಿತ್ರದಲ್ಲಿ ಸರಸ್ ಅಧ್ಯಕ್ಷ ಶ್ರೀ ಆರ್.ವಿಶ್ವನಾಥನ್, ಕಾರ್ಯದರ್ಶಿ ಶ್ರೀ ಆರ್.ಎಸ್.ಅಯ್ಯರ್, ನ್ಯಾಯವಾದಿ ಶ್ರೀ ಕೆ.ಬಿ.ಚಂದ್ರಚೂಡ ಇದ್ದಾರೆ.







Friday, October 26, 2018

DVG Nenapu-72 (26-10-2018, Friday) Photos

"ಡಿವಿಜಿ ನೆನಪು" ತಿಂಗಳ ಉಪನ್ಯಾಸ ಕಾರ್ಯಕ್ರಮದ 72 ನೇ ತಿಂಗಳಿನ ಕಾರ್ಯಕ್ರಮ. ಪೂಜ್ಯ ಸ್ವಾಮಿ ಜಪಾನಂದಜಿಯವರು "ಡಿವಿಜಿ ಚಿಂತನೆಯಲ್ಲಿ ಸಂಸ್ಕೃತಿ'' ಎಂಬ ಬಗ್ಗೆ ವಿಚಾರಪ್ರಚೋದಕವಾದ ಉಪನ್ಯಾಸ ನೀಡಿದರು. ತಿಪಟೂರಿನ ಶಾಸಕರಾದ ಶ್ರೀ ಬಿ.ಸಿ.ನಾಗೇಶ್ ವರವರು ಮತ್ತು ಖ್ಯಾತ ಕೈಗಾರಿಕೋದ್ಯಮಿ ಬೆಂಗಳೂರಿನ ಶ್ರೀ ಯಜ್ಞನಾರಾಯಣ ಕಮ್ಮಾಜೆರವರು ಮುಖ್ಯ ಅತಿಥಿಗಳಾಗಿದ್ದರು. ಎಂದಿನಂತೆ ಸಭಾಂಗಣ ಸಹೃದಯ ಗಣ್ಯನಾಗರಿಕರಿಂದ ಭರ್ತಿಯಾಗಿತ್ತು.